ಬಳ್ಳಾರಿ: ಅಕ್ಟೋಬರ್ 24ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಬಳ್ಳಾರಿಯ 110/11 ಕೆ.ವಿ ದಕ್ಷಿಣ ಉಪ-ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಅಕ್ಟೋಬರ್ 24 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಿದ್ಧಾಪುರ ರಸ್ತೆ, ಗುಗ್ಗರಹಟ್ಟಿ, ಆಂಧ್ರಾಳ್, ಮಿಂಚೇರಿ, ಮುಂಡರಗಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.