ಶಿವಮೊಗ್ಗ: ಸರೋಜಿನಿ ಮಹಿಶಿ ವರದಿ ಜಾರಿಗೆ ಶಿವಮೊಗ್ಗ ನಗರದಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ
ಸರೋಜಿನಿ ಮಹಿಶಿ ವರದಿಯನ್ನ ಜಾರಿಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮುಖಂಡರು ಪ್ರತಿಭಟನೆಯನ್ನು ನಡೆಸಿದರು ಸೋಮವಾರ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಹಾಗೂ ಸಮಗ್ರ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾ ಕಾರ್ಯ ರೂಪ ಕಲ್ಪಿಸಿ, ಕಲ್ಪಿಸಿ, ಉದ್ಯೋಗ ಕಲ್ಪಿಸಿ ಎಂಬ ಘೋಷಣೆ ಮತ್ತು ಈ ಬಾರಿ ಎತ್ತಿದ್ರೆ ಗದೆ, ಇಳಿಸಿದ್ರೆ ವದೆ ಎಂಬ ಘೋಷಣೆಯನ್ನು ಸಹ ಕೂಗಿದ್ದು ವಿಶೇಷವಾಗಿತ್ತು.