ಚಿಕ್ಕಮಗಳೂರು: ಜಿಲ್ಲೆಯಲ್ಲಿ ಡೆಂಗ್ಯೂ ಕಡಿಮೆಯಾಗಿದ್ದು, ಜನರು ಮುಂಜಾಗ್ರತೆ ವಹಿಸಿ:ನಗರದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ ಅಶ್ವಥ್ ಬಾಬು
ಜಿಲ್ಲೆಯಲ್ಲಿ ಡೆಂಗೆ ಜ್ವರದ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಸಾರ್ವಜನಿಕರು ಮೈಮರೆಯದೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ.50 ರಷ್ಟು ಡೆಂಗೆ ಪ್ರಕರಣಗಳು ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಜು.18ರವರೆಗೆ 630 ದೃಢೀಕೃತ ಡೆಂಗೆ ಪ್ರಕರಣಗಳು ಕಂಡುಬಂದಿದ್ದು ಯಾವುದೇ ಸಾವು ಸಂಭವಿಸಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತಿತರೆ ಇಲಾಖೆಗಳು, ನರ್ಸಿಂಗ್ ವಿದ್ಯಾರ್ಥಿಗಳು, ಆಶಾ, ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ, ಎಸ್‍ಎಚ್‍ಜಿ ಗುಂಪುಗಳ ಸಹಕಾರದಿಂದ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಿದ್ದು ಇದಕ್ಕೆ ಪೂರಕವಾಗಿ ಮಳೆಯು ಉತ್ತಮವಾಗಿದ್ದು, ಡೆಂಗ್ಯೂ ನಿಯಂತ್ರಣವಾಗಿದೆಯೆಂದರು.