ಚಾಮರಾಜನಗರ: ನಗರದಲ್ಲಿ ಹಠಾತ್ ಹೃದಯಾಘಾತದಿಂದ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಸಾವು
ವಾಕ್ ಮಾಡಿದ ಬಳಿಕ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ಭಾನುವಾರ ನಡೆದಿದೆ. ಶಿವಕುಮಾರ್(51) ಎಂಬವರು ನಿಧನರಾದವರು. ತಾಳವಾಡಿಯ ಜೆಎಸ್ಎಸ್ ಐಟಿಐ ಕಾಲೇಜಿನ ತರಬೇತಿ ಅಧಿಕಾರಿಯಾಗಿದ್ದ ಶಿವಕುಮಾರ್, ಚಾಮರಾಜನಗರದ ನಿವಾಸಿಯಾಗಿದ್ದರು. ಎಂದಿನಂತೆ ಬೆಳಗಿನ ವಾಕಿಂಗ್ ಮುಗಿಸಿದ ನಂತರ ಹಠಾತ್ ಹೃದಯಾಘಾತವಾಗಿದ್ದು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿತರದಾರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಗಡಿಜಿಲ್ಲೆಯಲ್ಲೂ ಕೂಡ ಹಠಾತ್ ಹೃದಯಾಘಾತ ಪ್ರಕರಣ ಕಂಡುಬರುತ್ತಿವೆ.