ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸೈಟಿ ಉದ್ಘಾಟಿಸಿದ ಶಾಸಕ ಡಾ. ಚಂದ್ರು ಕೆ. ಲಮಾಣಿ
ಲಕ್ಷ್ಮೇಶ್ವರ ಪಟ್ಟಣದಲ್ಲಿ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸೈಟಿ ಯಕ್ಸಂಬಾ ಲಕ್ಷ್ಮೇಶ್ವರ ಶಾಖೆಯನ್ನು ಶಾಸಕ ಡಾ. ಚಂದ್ರು ಕೆ. ಲಮಾಣಿ ಅವರು ಇ- ಸ್ಟಾಂಪಿಂಗ್ ಸೇವಾ ಕೇಂದ್ರ ಉದ್ಘಾಟಿಸಿದರು. ಇ-ಸ್ಪಾಂಪಿಂಗ್ ಸೇವಾ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸಿ, ಗ್ರಾಹಕ ಸ್ನೇಹಿಯಾಗಿ ಬೆಳೆಯಲಿ ಅಂತ ಹಾರೈಸಿದರು. ಈ ಸಂದರ್ಭದಲ್ಲಿ ವೀರಣ್ಣ ಪವಾಡ, ಈರಣ್ಣ ಅಂಗಡಿ, ಗಂಗಾಧರ ಶಿರಹಟ್ಟಿ, ಪವನ ದಾನಿ, ನಾಗರಾಜ್ ತೋಟರ, ವಿಜಯ ಬೂದಿಹಾಳ, ಬಸವರಾಜ ಚಕ್ರಸಾಲಿ ಹಾಗೂ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.