ಲಕ್ಷ್ಮೇಶ್ವರ: ಪಟ್ಟಣದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ.ಹವಳದರಿಗೆ ಅಭಿನಂದನಾ ಸಮಾರಂಭ
ಇಂದು ಲಕ್ಷ್ಮೇಶ್ವರ ಪಟ್ಟಣದ APMC ಸಭಾಭವನದಲ್ಲಿ ಜರುಗಿದ ದಶಕಗಳ ಕಾಲ ಸಮರ್ಥ ಸಮರ್ಪಣಾ ಸೇವೆಯ ಶಿಸ್ತಿನ ಅಧಿಕಾರಿಗಳು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ ಎಂ ಹವಳದರಿಗೆ ಅಭಿನಂದನಾ ಸಮಾರಂಭ ಹಾಗೂ ರೇಣುಕಾ ಎಂ ಹವಳದ ದಂಪತಿಗಳಿಗೆ ಸನ್ಮಾನ ಸಮಾರಂಭವನ್ನು ಶಾಸಕ ಡಾ. ಚಂದ್ರು ಕೆ. ಲಮಾಣಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಿಕಿ ನಾಯ್ಕ್, ಬಿ ಎಸ್ ಹರ್ಲಾಪುರ, ಈಶ್ವರ್ ಮೆಡ್ಲೇರಿ, ಗುರು ಹವಳದ, ಎಂ ಹೆಚ್ ಕೊಚಬಾಳ,ಮಾಂತೇಶ್ ಹವಳದ, ಎಚ್ ಎಮ್ ಮುಳಗುಂದ, ಎ ಎಚ್ ಇಚ್ಚಂಗಿ, ವಿಜಯ ಬೂದಿಹಾಳ, ಬಸವರಾಜ ಇದ್ದರು.