ಶಿವಮೊಗ್ಗ: ಅರಹತೊಳಲು ಗ್ರಾಮದ ಎಲೆಕ್ಟ್ರಿಕಲ್ ಅಂಗಡಿ ಮತ್ತು ಆಭರಣ ಮಳಿಗೆಯಲ್ಲಿ ಕಳ್ಳತನ
ರೋಲಿಂಗ್ ಷಟರ್ ಮುರಿದು ಗೋಡೆ ಕೊರೆದು ಎಲೆಕ್ಟ್ರಿಕಲ್ ಅಂಗಡಿ ಮತ್ತು ಆವರಣದ ಮಳಿಗೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಗದು ಕಳ್ಳತನ ಮಾಡಿರುವ ಘಟನೆ ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಸಂಭವಿಸಿದೆ. ರೇಣುಕಾಂಬ ಎಲೆಕ್ಟ್ರಿಕಲ್ ಅಂಗಡಿ ಹಿಂಭಾಗಲಿನ ರೋಲಿಂಗ್ ಶೆಟರ್ ಮುರಿದು ಒಳ ನುಗ್ಗಿ 5 ಲಕ್ಷ ನಗದು ದೋಚಿದ ಕಳ್ಳರು.ಎಲೆಕ್ಟ್ರಿಕಲ್ ಅಂಗಡಿ ಶೌಚಾಲಯದ ಒಳಗಿನಿಂದ ಪಕ್ಕದಲ್ಲಿನ ಪ್ರಕಾಶ್ ಆಭರಣದ ಅಂಗಡಿ ಗೋಡೆ ಕೊರಿದಿದ್ದಾರೆ.ಅಲ್ಲಿ ಸುಮಾರು 18.55 ಲಕ್ಷ ರೂಪಾಯಿ ಮೌಲ್ಯದ ಚಿನ್ನ,ಬೆಳ್ಳಿ ಆಭರಣ ಕಳುವು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.