ಹೊಸಪೇಟೆ: ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆದ ರೈಲು ಅಪಘಾತದ ಅಣುಕು ಪ್ರದರ್ಶನ
ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಎನ್ಡಿಆರ್ಎಫ್, ರೈಲ್ವೇ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸರ ಸಹಯೋಗದಲ್ಲಿ ರೈಲು ಅಪಘಾತದ ರಕ್ಷಣಾ ಕಾರ್ಯಾಚರಣೆ ಅಣುಕು ಪ್ರದರ್ಶನ ನಡೆಯಿತು. ಗಾಯಾಳುಗಳ ರಕ್ಷಣೆ ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.