ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ತನಿಖೆಯಂತೆ ಎಲ್ಲಾ ನಿಯಮಗಳದ್ದು ವಹಿವಾಟು ತನಿಖೆಯಾಗಬೇಕು ನಗರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪ್ರತಿಕ್ರಿಯೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಈಗಾಗಲೇ ಸಚಿವರು ರಾಜೀನಾಮೆ ನೀಡಿದ್ದಾರೆ ಪ್ರಕರಣದ ತನಿಖೆ ಮುಂದುವರೆದಿದೆ,ಇಡಿ ಮತ್ತು ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಇದೇ ರೀತಿ ಎಲ್ಲಾ ನಿಗಮಗಳದ್ದು ವಹಿವಾಟು ತನಿಖೆಯಾಗಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆಗ್ರಹಿಸಿದ್ದಾರೆ. ಶಿವಮೊಗ್ಗ ನಗರಸಭೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ತಕ್ಷಣಕ್ಕೆ ಮಾಹಿತಿ ತರಿಸಿಕೊಂಡು ಕಾನೂನು ರೀತಿಯ ವ್ಯವಹಾರ ಆಗಿದೆಯಾ ಪರಿಶೀಲನೆ ನಡೆಸಬೇಕು. ಆಡಳಿತ ವ್ಯವಸ್ಥೆ ಅದೋಗತಿಗೆ ಹೋಗಿರುವುದು ಶೋಚನೀಯ. ಅಧಿಕಾರಿಗಳ ಕೈವಾಡ ಇದೆ ಅನ್ನೋದು ಸಾಬೀತಾಗಿದೆ. ಬಡವರ ಹಣ ದುರ್ಬಳಕೆಯಾಗಿದೆ. ಸರ್ಕಾರ ತೀಕ್ಷ್ಣವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ಹೇಳಿದರು.