ಶಿವಮೊಗ್ಗ: ಅಪ್ರಾಪ್ತನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಮಾಲೀಕನಿಗೆ ₹27 ಸಾವಿರ ದಂಡ ವಿಧಿಸಿದ ಶಿವಮೊಗ್ಗ ನ್ಯಾಯಾಲಯ
ಅಪ್ರಾಪ್ತನಿಗೆ ದ್ವಿಚಕ್ರವಾಹನ ಚಲಾಯಿಸಲು ನೀಡಿದ ಮಾಲೀಕನಿಗೆ ಶಿವಮೊಗ್ಗದ ನ್ಯಾಯಾಲಯ 27,000 ರೂ ದಂಡ ವಿಧಿಸಿದೆ ಏಪ್ರಿಲ್ 26ರಂದು ಶಿವಮೊಗ್ಗ ನಗರದ ಸಿಟಿ ಸೆಂಟರ್ ಬಳಿ ಸಂಚಾರಿ ಪೊಲೀಸರು ವಾಹನ ತಪಾಸಣೆ ಸಂದರ್ಭ ಅಪ್ರಾಪ್ತನೊಬ್ಬ ಟಿವಿಎಸ್ ಸ್ಟಾರ್ ಸಿಟಿ ಬೈಕ್ ಚಲಾಯಿಸುತ್ತಿದ್ದ. ಈ ಸಂಬಂಧ ಬೈಕ್ ಮಾಲಿಕ ಎಂ.ಮುಜಿಬ್ ವಿರುದ್ಧ ಪಶ್ಚಿಮ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಬೈಕ್ ಮಾಲೀಕನಿಗೆ 27 ಸಾವಿರ ರೂಪಾಯಿ ದಂಡ ವಿಧಿಸಿರುವ ಕುರಿತು ಭಾನುವಾರ ಪ್ರಕಟಣೆ ಮೂಲಕ ತಿಳಿದುಬಂದಿದೆ.