ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ಹಗರಣದಿಂದ ಕಾಂಗ್ರೆಸ್ ಮುಖ ಕಳಚಿದ: ನಗರದಲ್ಲಿ ಶಾಸಕ ಆರಗ ಜ್ಞಾನೇಂದ್ರ
ವಾಲ್ಮೀಕಿ ಅಭಿವೃದ್ಧಿ ಹಗರಣದಿಂದಾಗಿ ಕಾಂಗ್ರೆಸ್ ಮುಖ ಕಳಚಿದೆ ಎಂದು ಶಿವಮೊಗ್ಗ ನಗರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ಧಿ ಹಗರಣದಿಂದ ಕಾಂಗ್ರೆಸ್ ಮುಖ ಕಳಚಿದೆ. ನಾಗೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿದೆ.ಹಗರಣ ನಡೆದಿರುವುದು ನೋಡಿದ್ರೆ ಹಣ ಬೇರೆ ರಾಜ್ಯದ ಚುನಾವಣೆ ಗೋಸ್ಕರ ರವಾನಿಯಾಗಿದೆ.ಈ ಹಗರಣದಲ್ಲಿ ಸಿಎಂ,ಡಿಸಿಎಂ ಪಾತ್ರ ಇದೆ. ಅನ್ನೋದು ಸ್ಪಷ್ಟವಾಗಿದೆ. ಎಸ್ಐಟಿ ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಬೇಕು. ಪ್ರಮುಖ ಆರೋಪಿ ವರ್ಮಾ ಮೊಬೈಲ್ ಪತ್ತೆಯಾಗಿಲ್ಲ ಮೊಬೈಲ್ ಪತ್ತೆ ಆದರೆ ಯಾರು? ಯಾರಿಗೆ ಎಷ್ಟು ? ಹಣ ಕೊಟ್ಟಿದ್ದಾರೆ ಗೊತ್ತಾಗುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.