ಶಿವಮೊಗ್ಗ: ನಗರದಲ್ಲಿ ಚೈನ್ನೈ-ಶಿವಮೊಗ್ಗ ನಡುವಿನ ನೂತನ ರೈಲಿಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ
ಚೆನ್ನೈ ಮತ್ತು ಶಿವಮೊಗ್ಗ ನಡುವಿನ ನೂತನ ರೈಲಿಗೆ ಸಂಸದ ಬಿ ವೈ ರಾಘವೇಂದ್ರ ಅವರು ಶನಿವಾರ ಚಾಲನೆ ನೀಡಿದರು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ರೈಲಿಗೆ ಸಂಸದ ಬಿ ವೈ ರಾಘವೇಂದ್ರ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿವಮೊಗ್ಗ ಬೀರೂರು ನಡುವೆ ರೈಲ್ವೆ ಹಳಿ ಡಬ್ಲಿಂಗ್ ಆದರೆ ಬೆಂಗಳೂರಿಗೆ ಮತ್ತಷ್ಟು ಬೇಗ ತಲುಪಬಹುದು ಡಬ್ಲಿಂಗ್ ಗಾಗಿ ಕೇಂದ್ರಕ್ಕೆ 1200 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಆರಂಭವಾಗುವ ನಿರೀಕ್ಷೆ ಇದೆ ಎಂದರು.