ಶಿವಮೊಗ್ಗ: ನಗರದಲ್ಲಿ ಲ್ಯಾಂಡ್ ಆಗದ ಇಂಡಿಗೋ ವಿಮಾನ, ಗೃಹ ಸಚಿವ ಪರಮೇಶ್ವರ ಬೆಂಗಳೂರಿಗೆ ವಾಪಸ್
ಶಿವಮೊಗ್ಗಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ಇಂದಿಗೂ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದೆ ಹಿಂತಿರುಗಿರುವಾ ಘಟನೆ ಶನಿವಾರ ಜರುಗಿದೆ. ವಿಮಾನದಲ್ಲಿ ಆಗಮಿಸಿದಂತಹ ಗೃಹ ಸಚಿವ ಜಿ ಪರಮೇಶ್ವರ್ ಅವರು ಬೆಂಗಳೂರಿಗೆ ಮರಳುವಂತೆ ಆಗಿದ್ದು ಗೃಹ ಸಚಿವರ ಜಿಲ್ಲಾ ಪ್ರವಾಸ ಈ ಹಿನ್ನೆಲೆ ರದ್ದಾಗಿದೆ.ವಿಸಿಬಲಿಟಿ ಇಲ್ಲದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಇಂದಿಗೂ ವಿಮಾನ ಇವತ್ತು ಲ್ಯಾಂಡ್ ಆಗಲಿಲ್ಲ ಹಲವು ಬಾರಿ ಲ್ಯಾಂಡಿಂಗ್ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಹಾಗಾಗಿ ವಿಮಾನ ಬೆಂಗಳೂರಿಗೆ ಮರಳಿದೆ.