ಶಿವಮೊಗ್ಗ: ಕಾಶಿಪುರದ ಮನೆವೊಂದರ ಮುಂದೆ ದ್ವಿಚಕ್ರ ವಾಹನದಲ್ಲಿ ಬಂದು ನಿಂಬೆಹಣ್ಣು, ಬೆಲ್ಲ ಎಸೆದು ಹೋದ ಇಬ್ಬರು, ವಿನೋಬನಗರ ಠಾಣೆಯಲ್ಲಿ ದೂರು ದಾಖಲು
ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮನೆಯೊಂದರ ಮುಂದೆ ನಿಂಬೆಹಣ್ಣು ಮತ್ತು ಬೆಲ್ಲ ಎಸೆದು ಹೋಗಿದ್ದಾರೆ ಈ ಘಟನೆ ಸಿಸಿಟಿವಿಯಲ್ಲಿ ಸರಿಯಾಗಿದೆ ಮಾಟ ಮಂತ್ರ ಶಂಕೆ ವ್ಯಕ್ತಪಡಿಸಿರುವ ಮನೆ ಮಾಲೀಕರು ಶಿವಮೊಗ್ಗದ ವಿನೋಬನಗರದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕಾಶಿಪುರದ ಹನುಮಂತಪ್ಪ ಬಡಾವಣೆಯ ಎರಡನೇ ಅಡ್ಡರಸ್ತೆಯಲ್ಲಿರುವ ಶಿವಲಿಂಗೇಗೌಡ ಎಂಬುವರ ಮನೆ ಮುಂದೆ ದ್ವಿಚಕ್ರ ವಾಹನದಲ್ಲಿ ಬಂದ ಓರ್ವ ಪುರುಷ ಮತ್ತು ಮಹಿಳೆ ನಿಂಬೆಹಣ್ಣು ಮತ್ತು ಬೆಲ್ಲವನ್ನು ಎಸೆದು ಹೋಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದ್ದು ಈ ಸಂಬಂಧ ಮಾಟ ಮಂತ್ರದ ಶಂಕೆ ವ್ಯಕ್ತ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲು.