ಹೊನ್ನಾವರ: ಜೇನು ಹುಳುಗಳ ದಾಳಿಗೆ ರೈತನೋರ್ವ ಬಲಿಯಾಗಿ ಮೃತಪಟ್ಟ ಘಟನೆ ತಾಲ್ಲೂಕಿನ ಅನಿಲಗೋಡ ಬಳಿ ನಡೆದಿದೆ. ಹೊಳೆಬದಿಕೇರಿಯ ಮಂಜುನಾಥ ಗಣಪ ಅಂಬಿಗ (53) ಮೃತ ಪಟ್ಟ ವ್ಯಕ್ತಿ.ಕೃಷಿ ಕೆಲಸಕೆಂದು ತೆರಳುತ್ತಿದ್ದಾಗ ಅನಿಲಗೋಡ ಜನತಾ ವಿದ್ಯಾಲಯದ ಹಿಂಭಾಗದಲ್ಲಿ ಏಕಾ ಏಕಿ ಜೇನುಹುಳ ದಾಳಿ ಮಾಡಿ ತಲೆ ಮತ್ತು ಇನ್ನಿತರ ಭಾಗಕ್ಕೆ ಕಡಿದಿವೆ. ತಕ್ಷಣ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದರು.ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.