ಕೊಪ್ಪಳ: ಕೊಪ್ಪಳದಲ್ಲಿ ಬೃಹತ್ 'ಪ್ರತಿರೋಧ ತಿರಂಗಾ ಯಾತ್ರೆ': ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
Koppal, Koppal | Oct 24, 2026 ಕೊಪ್ಪಳದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಎಸ್.ಐ.ಆರ್ ಯೋಜನೆ ವಿರೋಧಿಸಿ ಪ್ರತಿರೋಧ ತಿರಂಗಾ ಯಾತ್ರೆ ನಡೆಯಿತು. ದೆಹಲಿ ಚಳವಳಿ ದಮನ ಮತ್ತು ಮತದಾರರ ಪಟ್ಟಿಯ ಲೋಪದೋಷಗಳ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ತಿಂಗಳು 27ರಂದು ಪ್ರಕಟವಾಗಲಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಲಾಯಿತು.