ಬೆಳಗಾವಿ: ಮಾಂಜಾ ದಾರಕ್ಕೆ ವಿದ್ಯಾರ್ಥಿ ಬಲಿ, ನಗರದ ಅಂಗಡಿಗಳ ಮೇಲೆ ಪೊಲೀಸರ ದಾಳಿ
ಬೆಳಗಾವಿಯಲ್ಲಿ ಮಾಂಜಾ ದಾರಕ್ಕೆ ಯುವಕ ಬಲಿಯಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಖಡೇಬಜಾರ್, ಶನಿವಾರ ಕೂಟ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ದಾರ ಜಪ್ತಿ ಮಾಡಲಾಗಿದ್ದು, ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಂಜಾ ದಾರ ಬಳಕೆ ಹಾಗೂ ಮಾರಾಟ ಮಾಡದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.