ಸಿದ್ಧಾಪುರ: ತಾಲ್ಲೂಕಿನ ಶೇಲೂರಿನಲ್ಲಿ ನಡೆದ ಮಾರಿಕಾಂಬಾ ದೇವಿ ಪಲ್ಲಕ್ಕಿ ಸಮರ್ಪಣೆ ಉತ್ಸವದಲ್ಲಿ ಶಾಸಕ ಭೀಮಣ್ಣ ಭಾಗಿ
ಸಿದ್ದಾಪುರ : ತಾಲೂಕಿನ ಶೇಲೂರಿನಲ್ಲಿ ನಡೆದ ಶ್ರೀ ಮಾರಿಕಾಂಬಾ ದೇವಿಗೆ ಪಲ್ಲಕ್ಕಿ ಸಮರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಶಾಸಕ ಭೀಮಣ್ಣ ನಾಯ್ಕ ಭಾಗವಹಿಸಿದರು. ಈ ವೇಳೆ ಮಾತನಾಡಿದ ಭೀಮಣ್ಣ, ಭಕ್ತಿ ಭಾವದಿಂದ ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸದಾ ಬೆಂಬಲವಿದೆ ಎಂದರು. ಇದೇ ಸಂದರ್ಭದಲ್ಲಿ ಗ್ರಹಲಕ್ಷ್ಮಿ ಯೋಜನೆಯಡಿ ಸಬಲೀಕರಣಗೊಂಡ ಮಹಿಳೆಯರು ಪಲ್ಲಕ್ಕಿಗೆ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾದರು.ಇದನ್ನು ಗಮನಿಸಿದ ಶಾಸಕರು, ಈ ರೀತಿಯ ಸಾಮೂಹಿಕ ಕಾರ್ಯಕ್ರಮಗಳು ಇನ್ನು ಹೆಚ್ಚು ಊರುಗಳಲ್ಲಿ ಆಯೋಜಿಸುವ ಮೂಲಕ ಸ್ತ್ರೀ ಸಬಲೀಕರಣವನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.