ಸಿದ್ಧಾಪುರ: ತಾಲೂಕಾ ಆಡಳಿತ ಸೌಧದಲ್ಲಿ ಶಾಸಕ ಭೀಮಣ್ಣರಿಂದ ಕುಡಿಯುವ ನೀರು ಹಾಗೂ ಜಾನುವಾರು ಮೇವಿನ ಕುರಿತು ಸಭೆ
ಸಿದ್ದಾಪುರ: ಪಟ್ಟಣ ವ್ಯಾಪ್ತಿಯ ಜನತೆಗೆ ಎರಡು ದಿನಕ್ಕೊಮ್ಮೆ ನೀರು ಬಿಡುವ ಪರಿಪಾಠವಿದೆ. ನೀರಿನ ಮೂಲವಿದ್ದಾಗ ಪ್ರತಿ ದಿನ ನೀರು ಪೂರೈಸಲು ಪಟ್ಟಣ ಪಂಚಾಯತ ಕ್ರಮ ಕೈಗೊಳ್ಳಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು. ಇಲ್ಲಿಯ ತಾಲೂಕಾ ಆಡಳಿತ ಸೌಧದಲ್ಲಿ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಉಂಟಾಗಬಹುದಾದ ಕುಡಿಯುವ ನೀರು ಹಾಗೂ ಜಾನುವಾರು ಮೇವಿನ ಸಮಸ್ಯೆ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಎಂಟು ಕೊಳವೆಬಾವಿ, ಹೂಸೂರ ನಾಲಾ ಸೇರಿದಂತೆ ನೀರಿನ ಮೂಲವಿದ್ದರೂ ಸಹ ಎರಡು ದಿನಕ್ಕೊಮ್ಮೆ ನೀರು ಕೊಡುತ್ತಿರುವುದು ಸರಿಯಲ್ಲ. ಜನರಿಗೆ ಸಮರ್ಪಕವಾಗಿ ನೀರು ಕೊಡಲಾಗದಿದ್ದರೆ ಯಾಕೆ ರಾಜಕಾರಣ ಮಾಡಬೇಕು ಎಂದು ಪ್ರಶ್ನಿಸಿದರು.