ಉಡುಪಿ: ಲಿಂಗ ಅಸಮಾನತೆ ಬೇಧಿಸಲು ಮಹಿಳೆಯರ ರಾಜಕೀಯ ಪ್ರವೇಶ ಅಗತ್ಯ: ನಗರದಲ್ಲಿ ಸಾಹಿತಿ, ಹೋರಾಟಗಾರ್ತಿ ಡಾ.ಜಿ.ವಿ ವೆನ್ನೆಲ ಗದ್ದರ್
Udupi, Udupi | Mar 9, 2024 ಸಮಾಜದಲ್ಲಿರುವ ಲಿಂಗ ಅಸಮಾನತೆ ಬೇಧಿಸಲು ಮಹಿಳೆಯರು ರಾಜಕೀಯವಾಗಿ ಮುಂದೆ ಬರುವುದು ತುಂಬಾ ಅಗತ್ಯವಾಗಿದೆ ಎಂದು ಸಾಹಿತಿ, ಹೋರಾಟಗಾರ್ತಿ ಡಾ.ಜಿ.ವಿ. ವೆನ್ನೆಲ ಗದ್ದರ್ ಹೇಳಿದರು. ಉಡುಪಿ ಬಾಸೆಲ್ ಮಿಷನ್ ಚರ್ಚ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ರಾಜಕೀಯದಲ್ಲಿ ಮಹಿಳೆಯರ ಪ್ರಯಾಣ ಸುಲಭವಲ್ಲ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮನೋಭಾವ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ಕೂಡ ಸಮಸ್ಯೆಯಾಗಿದೆ ಎಂದರು.