ಶ್ರೀರಂಗಪಟ್ಟಣ: ತಾಲ್ಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವಂತೆ ತಹಸೀಲ್ದಾರ್ ರವರಿಗೆ ಗ್ರಾಮಸ್ಥರಿಂದ ಮನವಿ
ನಾಗಮಂಗಲ ತಾಲ್ಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ದೂರು ನೀಡಿ ಕೂಡಲೇ ಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದರು. ನಾಗಮಂಗಲ ತಾಲ್ಲೂಕಿನ ಸಂಕನಹಳ್ಳಿ, ಹಂದೆನಹಳ್ಳಿ ದೇವನ ಹೊಸೂರು ಸುತ್ತಮುತ್ತ ರಾಜಕೀಯ ಮುಖಂಡರ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದರಿಂದಾಗುತ್ತಿರುವ ಅನಾಹುತಗಳನ್ನು ತಪ್ಪಿಸಲು ರೈತರು ಭಾನುವಾರ ಪಟ್ಟಣದ ತಾಲ್ಲೂಕು ಆಡಳಿತ ಸೌಧಕ್ಕೆ ಭೇಟಿನೀಡಿ ತಾಲ್ಲೂಕು ದಂಡಾಧಿಕಾರಿ ಆದರ್ಶ ಅವರಿಗೆ ದೂರು ಅಜರ್ಿ ಸಲ್ಲಿಸಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿದರು. ತಾಲ್ಲೂಕು ದಂಡಾಧಿಕಾರಿ ಆದರ್ಶ ಅವರು ಅಜರ್ಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭಾನುವಾರ ಸಂಜೆ 4 ಗಂಟೆಯಲ್ಲಿ ಭರವಸೆ ನೀಡಿದರು.