ಗಂಗಾವತಿ: ಕರ್ನಾಟಕ ರಾಜ್ಯೋತ್ಸವ ಸಭೆ ಬಹಿಷ್ಕರಿಸಿದ ಕನ್ನಡ ಪರ ಸಂಘಟನೆಗಳು
ಗಂಗಾವತಿಯಲ್ಲಿ ಇಂದು ತಾಲೂಕು ದಂಡಾಧಿಕಾರಿಗಳು ಕರೆದಿದ್ದ ಕರ್ನಾಟಕ ರಾಜ್ಯೋತ್ಸವ ಸಭೆಯನ್ನು ಕನ್ನಡ ಪರ ಸಂಘಟನೆಗಳು ಬಹಿಷ್ಕರಿಸಿವೆ. ಸರ್ಕಾರಿ ಅಧಿಕಾರಿಗಳ ವರ್ತನೆಯನ್ನು ವಿರೋಧಿಸಿ ಸಂಘಟನೆಯ ಪದಾಧಿಕಾರಿಗಳು ಸಭೆಯಿಂದ ಹೊರಬಂದು ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ.