ಗದಗ: ಆರ್‌ಸಿಬಿ ಫೈನಲ್ ಜಯಿಸಲಿ: ಅಭಿಮಾನಿಗಳಿಂದ ನಗರದ ಪಂಚಾಕ್ಷರಿ ಮಠದಲ್ಲಿ ವಿಶೇಷ ಪೂಜೆ
Gadag, Gadag | Jun 2, 2025 ಆರ್ ಸಿ ಬಿ ತಂಡ 2025ರ ಐಪಿಎಲ್ ಕಪ್ ಗೆಲ್ಲಲಿ ಅಂತ ನಗರದ ಐತಿಹಾಸಿಕ ಶ್ರೀ ವೀರೇಶ್ವರ ಪುಣ್ಯಶ್ರಾಮದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. 2016ರ ಬಳಿಕ ಮೊದಲ ಬಾರಿ ಫೈನಲ್ ಹಣಹಣಿಯಲ್ಲಿ ಆರ್‌ಸಿಬಿ ಪಂಜಾಬ್ ತಂಡವನ್ನು ಎದುರಿಸಿ ಜಯ ಸಾಧಿಸಲಿ ಅಂತ ಅಭಿಮಾನಿಗಳು ಹಾರೈಸಿದರು. ಇದೇ ವೇಳೆ ಶ್ರೀ ಪಂಚಾಕ್ಷರಿ ಗವಾಯಿ, ಶ್ರೀ ಹಾನಗಲ್ ಕುಮಾರೇಶ್ವರ, ಶ್ರೀ ಪಂಡಿತ ಪುಟ್ಟರಾಜ ಗವಾಯಿ ಅವರ ಗದ್ದುಗೆಗೆ ವಿಶೇಷ ನಮನ ಸಲ್ಲಿಸಿದರು.