ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ, ಮಹಿಳಾ ಅಪಹರಣ, ಮಾದಕವಸ್ತು (ಡ್ರಗ್ಸ್) ಹಾವಳಿ ಸೇರಿ ಕಾನೂನು ಸುವ್ಯವಸ್ಥೆಯು ಏರುಪೇರಾಗುವ ಎಲ್ಲ ವ್ಯವಸ್ಥೆಗೆ ಪೋಷಣೆ ಕೊಡುವ ಕೆಲಸವನ್ನು ಕರ್ನಾಟಕ ಸರಕಾರ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಅವರು ಆಕ್ಷೇಪಿಸಿದ್ದಾರೆ. ಲೋಕಭವನದ ಬಳಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಪುರುಷ- ಮಹಿಳಾ ಕಾರ್ಯಕರ್ತರ ವಿರುದ್ಧ ಕೇಸು ಹಾಕಿಸುವ ರೀತಿಯಲ್ಲಿ ಎಲ್ಲ ಕಾನೂನುಗಳನ್ನು ಹಾಕಿ ಅವರನ್ನು ಬಂಧಿಸಲಾಗುತ್ತಿದೆ. ತಪ್ಪು ಮಾಡಿದ ಕಾಂಗ್ರೆಸ್ಸಿನವರನ್ನು ಬಿಡುಗಡೆ ಮಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.