ಬೀಳಗಿ: ಪಬ್ಲಿಕ್ ಅ್ಯಪ ಫಲಶೃತಿ,ಕೋಲೂರಿನ ಡಾ.ಅಂಬೇಡ್ಕರ್ ವಸತಿ ನಿಲಯಕ್ಕೆ ತಹಶೀಲ್ದಾರ್ ವಿನೋದ್ ಹತ್ತಳ್ಳಿ ಭೇಟಿ ಪರಿಶೀಲನೆ,ಅಧಿಕಾರಿಗಳ ವರ್ಗಾವಣೆ
ಬಾಗಲಕೋಟೆ ಜಲ್ಲೆಯ ಬೀಳಗಿ ತಾಲೂಕಿನ ಕೋಲೂರು ಪುನರ್ವಸತಿ ಕೇಂದ್ರದಲ್ಲಿರುವ ಡಾ.ಅಂಬೇಡ್ಕರ್ ಮೆಡ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ ಹಾಗೂ,ಅಧಿಕಾರಿಗಳು ಕೇವಲ ಹಾಜರಾತಿಗೆ ಮಾತ್ರ ಸೀಮಿತರಾಗಿದ್ದಾರೆಂದು ಎಂದು ಆರೋಪ ಕೇಳಿ ಬಂದಿರುವ ಸುದ್ದಿ ಪಬ್ಲಿಕ್ ಆಪ್ ನಲ್ಲಿ ಬಿತ್ತರಿಸಲಾಗಿತ್ತು.ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳು ಸರಿಯಾಗಿಲ್ಲದ ಕಾರಣ ಸ್ಥಳೀಯರು,ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ತಹಶೀಲ್ದಾರ್,ಶಿರಸ್ತೇದಾರ ಮಂಜುನಾಥ್ ಧರಿಗೊಂಡ, ಇತರು ಭೇಟಿ ನೀಡಿ ಮಕ್ಕಳ ಸಮಸ್ಯೆ ಯನ್ನು ಆಲಿಸಿದರು. ಹಾಗೂ ಇಬ್ಬರು ಅಧಿಕಾರಿಗಳನ್ನು ಬೇರೆಕಡೆಗೆ ವರ್ಗಾಯಿಸಿದ್ದಾರೆ.