ರಾಯಚೂರು: ನಗರಕ್ಕೆ ಡಾ.ರಾಜ್ ಕುಮಾರ ಮೊಮ್ಮಗ ಯುವ ಭೇಟಿ, ಏನೇಳಿದ್ರು ನೋಡಿ
ಜುಲೈ 17 ಕ್ಕೆ ಬಿಡುಗಡೆಯಾಗಲಿರುವ ಎಕ್ಕ ಸಿನಿಮಾ ವೀಕ್ಷಿಸಿ ಯಶಸ್ವಿಗೊಳಿಸಲು ಅಭಿಮಾನಿಗಳಿಗೆ ವರನಟ ಡಾ.ರಾಜಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ಮನವಿ ಮಾಡಿದರು. ಅವರು ಜುಲೈ 6 ರ ರವಿವಾರ ಮಧ್ಯಾಹ್ನ 2 ಗಂಟೆಗೆ ಮಂತ್ರಾಲಯ ರಾಯರ ದರ್ಶನ ಪಡೆದು ನಂತರ, ನಗರದ ಗಾಂಧೀ ಚೌಕನಲ್ಲಿರುವ ಹನುಮಾನ ಮಂದಿರಕ್ಕೆ ಆಗಮಿಸಿ ದರ್ಶನ ಪಡೆದರು. ಈ ವೇಳೆ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ದಾಖಲೆ ಬರೆದಿದೆ ಎಂದ ಅವರು ಹಾಡು ಯಶಸ್ವಿಗೊಳಿಸಿದ ಎಲ್ಲಾ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಕುಟುಂಬದ ಚಿತ್ರಗಳನ್ನು ಎಲ್ಲ ಅಭಿಮಾನಿಗಳು ಬೆಂಬಲ ನೀಡಿ ಪ್ರೋತ್ಸಾಹಿಸುತ್ತಾರೆ. ಯುವ ಸಿನಿಮಾ ಕೂಡ ಯಶಸ್ವಿಗೊಳಿಸಿದರು ಎಂದರು