ಕುರುಗೊಡು: ಮುಸ್ಲಿಮರು ಇಲ್ಲದ ಮುಷ್ಠಗಟ್ಟೆ ಗ್ರಾಮದಲ್ಲಿ ಭಾವೈಕ್ಯತೆ ಮೆರೆದ ಮೊಹರಂ ಹಬ್ಬ
ಕುರುಗೋಡು ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲದಿದ್ದರೂ ನೂರಾರು ವರ್ಷಗಳಿಂದ ಹಿಂದೂಗಳು ಶ್ರದ್ಧಾಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದಾರೆ. ಗ್ರಾಮದಲ್ಲಿ ಮೌಲಾಲಿ ತಾತನಿಗೆ ಜುಲೈ 5,ಶನಿವಾರ ಸಂಜೆ 7ಗಂಟೆಗೆ ವಿಶೇಷ ಪೂಜೆ ನಡೆಯಿತು, ಪಕ್ಕದ ಹೆಚ್. ವೀರಾಪುರದಿಂದ ಮುಸ್ಲಿಂ ಮುಕ್ತಾಯರು ಆಗಮಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಾರೆ. ಈ ಆಚರಣೆ ಗ್ರಾಮಸ್ಥರ ಭಾವೈಕ್ಯತೆ, ಸಹಿಷ್ಣುತೆಗೂ ನಿದರ್ಶನವಾಗಿದೆ.ಧರ್ಮ-ಸಾಂಸ್ಕೃತಿಕ ಭಿನ್ನತೆಗಳನ್ನು ಮರೆತು ಮಾನವೀಯತೆ ಮತ್ತು ಭಕ್ತಿಯ ಪರಮೋನ್ನತ ಉದಾಹರಣೆ ನೀಡುತ್ತಿರುವ ಕುರುಗೋಡು ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ, ಮೊಹರಂ ಹಬ್ಬವು ನೂರಾರು ವರ್ಷಗಳಿಂದ ಹಿಂದೂ ಸಮಾಜದವರು ಶ್ರದ್ಧೆಭಕ್ತಿಯಿಂದ ಆಚರಿಸುತ್ತಿದ್ದಾರೆ. ವಿಶೇಷವೆಂದರೆ ಈ