ಶಿವಮೊಗ್ಗ: ಅಗ್ನಿಪತ್ ಯೋಜನೆಯ ಬಗ್ಗೆ ಹಗುರವಾದ ಮಾತು ಬೇಡ ನಗರದಲ್ಲಿ ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ಸಂಚಾಲಕ ಉಮೇಶ್ ಬಾಪಟ್
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಅಗ್ನಿಪಾತ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದು ಇದು ಸೈನಿಕರಿಗೆ ಮಾಡಿದ ಅವಮಾನವಾಗಿದೆ ಅವರು ಯುವಜನತೆಯ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಶದ ಸಂಚಾಲಕ ಉಮೇಶ್ ಬಾಬರ್ ಹೇಳಿದ್ದಾರೆ. ಶಿವಮೊಗ್ಗ ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಗ್ನಿಪತ್ ಯೋಜನೆ ಭಾರತದ ಸೈನ್ಯವನ್ನು ಬಲಪಡಿಸುವ ಹಾಗೂ ದೇಶವನ್ನು ಕಾಪಾಡುವ ದೇಶ ಸೇವೆಯೇ ಪರಮೋಚ್ಛ ಎಂದು ಬಿಂಬಿಸುವ ಯೋಜನೆಯಾಗಿದೆ. ಆದರೆ ಕಾಂಗ್ರೆಸ್ಸಿಗರು ಅದರಲ್ಲೂ ರಾಹುಲ್ ಗಾಂಧಿಯವರು ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.