ಶಿವಮೊಗ್ಗ: ನಗರದ ಗಾಂಧಿ ಬಜಾರ್‌ನಲ್ಲಿ ಪೊಲೀಸರಿಂದ ಹಲ್ಲೆಗೊಳಗಾದ ವ್ಯಾಪಾರಿಯ ಮನೆಗೆ ಭೇಟಿ ನೀಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಸೋಮವಾರ ಫುಟ್ ಪಾತ್ ವ್ಯಾಪಾರ ಮಾಡುತ್ತಿದ್ದಂತಹ ಬಸವರಾಜ್ ಎಂಬುವವರ ಮೇಲೆ ಪೊಲೀಸ್ ಪೇದೆ ಹಲ್ಲೆ ಮಾಡಿದ್ದು ಇದರಿಂದ ವ್ಯಾಪಾರಿಯಾ ತಲೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಇನ್ನಾ ಹಲ್ಲೆಗೊಳಗಾದ ವ್ಯಾಪಾರಿ ಬಸವರಾಜ್ ಅವರ ಮನೆಗೆ ಬುಧವಾರ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಹೆಚ್ಚಿನ ಚಿಕಿತ್ಸೆಗಾಗಿ ಈ ದಿನ ಜಿಲ್ಲಾ ಅಧ್ಯಕ್ಷರಿಗೆ ದೂರವಾಣಿ ಮುಖಾಂತರ ಚರ್ಚಿಸಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸಹ ಸೂಚನೆಯನ್ನು ನೀಡಿದ್ದಾರೆ.