ಕಲಬುರಗಿ : ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಸುಲಿಗೆಕೋರರನ್ನ ಬಂಧಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ. ಡಿ3 ರಂದು ಸಂಜೆ 5.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ಕಲ್ಲಪ್ಪ ಪೂಜಾರಿ ಮತ್ತು ಸಂತೋಷ್ ಎಂಬಾತರನ್ನ ಬಂಧಿಸಲಾಗಿದೆ.. ಬಂಧಿತ ಸುಲಿಗೆಕೋರರಿಂದ 61 ಗ್ರಾಂ ಚಿನ್ನದ ವಸ್ತುಗಳು, 680 ಗ್ರಾಂ ಬೆಳ್ಳಿ ವಸ್ತುಗಳು ಸೇರಿದಂತೆ ಒಟ್ಟು ₹7 ಲಕ್ಷ 62 ಸಾವಿರದ 400 ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಅಂತಾ ನಗರ ಪೊಲೀಸ್ ಆಯುಕ್ತರಾದ ಡಾ ಶರಣಪ್ಪ ಹೇಳಿದ್ದಾರೆ.