ತುಮಕೂರು: ನಗರದ ಖಾಸಗಿ ಲಾಡ್ಜ್‌ನಲ್ಲಿ ದಾವಣಗೆರೆಯ ಪಿಎಸ್ಐ ಆತ್ಮಹತ್ಯೆ
ಸಬ್ ಇನ್ಸ್ ಪೆಕ್ಟರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪಿಎಸ್ಐ ಅವರನ್ನು ದಾವಣಗೆರೆ ಬಡಾವಣೆ ಠಾಣೆಯ 55 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ದಾವಣಗೆರೆ ಬಡಾವಣೆ ಠಾಣೆಯ ಪಿಎಸ್ಐ ನಾಗರಾಜು ಜು.1ರಂದು ತುಮಕೂರು ನಗರದಲ್ಲಿರುವ ದ್ವಾರಕ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಮೂರ್ನಾಲ್ಕು ದಿನಗಳಿಂದ ಲಾಡ್ಜ್ ನಲ್ಲಿಯೇ ವಾಸವಿದ್ದ ಪಿಎಸ್ಐ ನಾಗರಾಜು ರೂಂನಿಂದ ಹೊರ ಬಂದಿರಲಿಲ್ಲ ಎನ್ನಲಾಗಿದೆ. ಲಾಡ್ಜ್ ಸಿಬ್ಬಂದಿ ಕರೆ ಮಾಡಿದರೂ ನಾಗರಾಜು ಕರೆ ಸ್ವೀಕರಿಸಿರಲಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಲಾಡ್ಜ್