ಗ್ರಾಮಗಳ ಅಭಿವೃದ್ಧಿಯೆ ಕಾಂಗ್ರೆಸ್ ಪಕ್ಷದ ಮೂಲ ಧ್ಯೇಯ : ದೊಡ್ಡವಲಬ್ಬಿ ಶಾಸಕ ಕೊತ್ತೂರು ಜಿ ಮಂಜುನಾಥ್ ಚೌಡೇನಹಳ್ಳಿ- ದೊಡ್ಡವಲಬ್ಬಿ- ಕಲ್ಕೆರೆ ಮಾರ್ಗವಾಗಿ ಬೆಳಮಾರನಹಳ್ಳಿ ಮುಖ್ಯ ರಸ್ತೆವರಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ ಅಂದಾಜು 175.00ಲಕ್ಷ ಅಭಿವೃದ್ಧಿ ಕಾಮಗಾರಿಗೆ ದೊಡ್ಡವಲಬ್ಬಿ ಗ್ರಾಮದಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್ ರವರು ಬುಧವಾರ ಬೆಳಗ್ಗೆ 10 ಗಂಟೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ್ದಾರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ