ಬೆಳಗಾವಿ: ಕಬ್ಬು ಬೆಳೆಗಾರರ ಜೊತೆಗೆ ನಡೆದ ಸಂಧಾನ ಸಭೆ ವಿಫಲ ಹಿನ್ನೆಲೆ ಗುರ್ಲಾಪೂರ ಕ್ರಾಸ್ ಬಳಿ ಸಚಿವ ಎಚ್ ಕೆ ಪಾಟೀಲ ಕಾರಿಗೆ ಮುತ್ತಿಗೆ ಹಾಕಿದ ರೈತರು
ಕಳೆದ ಹಲವಾರು ದಿನಗಳಿಂದ ಕಬ್ಬಿಗೆ ಬೆಂಬಲ್ ಬೆಲೆ ನೀಡುವಂತೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು ಆದರೆ ಇಂದು ಸ್ಥಳಕ್ಕೆ ಸಚಿವ ಎಚ್ ಕೆ ಪಾಟೀಲ ಭೇಟಿ ನೀಡಿ ಕಬ್ಬು ಬೆಳೆಗಾರರ ಜೊತೆಗೆ ನಡೆದ ಸಂಧಾನ ಸಭೆ ನಡೆಸಿದ್ದರು ಸಂಧಾನ ಸಭೆ ವಿಫಲ ಹಿನ್ನೆಲೆ ಮರಳುವಾಗ ಸಚಿವ ಎಚ್.ಕೆ ಪಾಟೀಲ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ ಬುಧುವಾರ 7 ಗಂಟೆಗೆ ಸಚಿವ ಎಚ್.ಕೆ ಪಾಟೀಲ ವಾಹನ ತಡೆದು ಪ್ರತಿಭಟನೆ ಬೆಳಗಾವಿ ಕಡೆಗೆ ಹೊರಟಿದ್ದ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು ರೈತರನ್ನು ಚದುರಿಸಲು ಪೊಲೀಸರ ಹರಸಾಹಸ ಪಟ್ಟರು.