ಬೆಳಗಾವಿ: VTU 26ನೇ ಘಟಿಕೋತ್ಸವ: 74,763 ವಿದ್ಯಾರ್ಥಿಗಳಿಗೆ ಪದವಿ, 12 ಚಿನ್ನದ ಪದಕ ಗೆದ್ದ ವಿಶ್ವನಾಥ್
ಬೆಳಗಾವಿಯ ವಿಟಿಯುನಲ್ಲಿ ನಡೆದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ 74,763 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ್ ಗಹ್ಲೋಟ್ ಕಾರ್ಯಕ್ರಮ ಉದ್ಘಾಟಿಸಿದರು. ಎಚ್.ಎಂ.ವಿಶ್ವನಾಥ್ 12 ಚಿನ್ನದ ಪದಕಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.