ಶಿಕಾರಿಪುರ: ತಾಲೂಕಿನ ಬಿಜೆಪಿಯ ಮುಖಂಡರಾದ ಕಬಡ್ಡಿ ರಾಜಣ್ಣ ಪಟ್ಟಣದ ಪತ್ರಿಕಾ ಭವನದಲ್ಲಿ ರಾಜಕೀಯ ನಿವೃತ್ತಿ ಘೋಷಣೆ
ತಾಲ್ಲೂಕು ಬಿಜೆಪಿಯ ನಗರಾದ್ಯಕ್ಷರಾಗಿ ಸೇವೆಸಲ್ಲಿಸಿದ್ದ ಕಬಡಿ ರಾಜಣ್ಣ ಧಿಡೀರ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ,ಬಧವಾರ ಮಾಧ್ಯಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಲಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಬಿಜೆಪಿ ಆಹ್ವಾನಿಸಿ ಪಕ್ಷದಲ್ಲಿ ನಗರಾಧ್ಯಕ್ಷ ಹುದ್ದೆ ನೀಡಿತ್ತು. ಈ ಸ್ಥಾನವನ್ನು ಅತಿ ಜವಾಬ್ದಾರಿಯುತವಾಗಿ ನಿಭಾಯಿಸಿದ್ದು, ನನ್ನ ಸಮಾಜದ ಸೇವೆ ನಿಭಾಯಿಸುತ್ತಿದ್ದು ಹಾಗೂ ನನ್ನ ವೈಯಕ್ತಿಕ ಹಲವು ಸಮಸ್ಯಗಳಿಂದ ನಾನು ರಾಜಕಾರಣದಿಂದ ದೂರವಿರಬೇಕಾಗಿದೆ ಎಂದರು.1989 ರಿಂದ 94 ರವರೆಗೆ ಬಂಡಿಯ ಕಾಂಗ್ರೆಸ್ಸಿನಿಂದ ಪುರಸಭಾ ಸದಸ್ಯನಾಗಿದ್ದ ನನಗೆ ಎಸ್ ಬಂಗಾರಪ್ಪರವರ ಜೊತೆಗೆ ಗುರುತಿಸಿಕೊಂಡಿದೆ.