ಜನರ ಆಚಾರ-ವಿಚಾರ, ಬದುಕು ಭಂಡಾರವೇ ಜಾನಪದ ಸಾಹಿ ತ್ಯವಾಗಿ ಹೊರಹೊಮ್ಮಿದೆ. ಜಾನಪದ ಶಬ್ದ ಭಂಡಾರದ ಸೊಗಡನ್ನು ದಾಖಲಿಸಿಕೊಳ್ಳುವ ಮೂಲಕ ಮುಂ ದಿನ ತಲೆಮಾರಿನವರಿಗೆ ಜಾನಪದದ ಸವಿಯನ್ನುಣಿಸಬೇಕೆಂದು ಕಜಾಪ ರಾಜ್ಯಾದ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದರು. ನಗರದ ಕೆಂಪನಹಳ್ಳಿ ಸಮೀಪ ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಜಾನಪದ ಪರಿಷತ್, ಬೆಂಗಳೂರು, ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕದ ಸೇವಾದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.