ಪಾವಗಡ: ಪಾವಗಡದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ: ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಜಾಗೃತಿ
ಪಾವಗಡದ ತಿರುಮಣಿ ವೃತ್ತದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆಯಲ್ಲಿ ಉಪನಿರ್ದೇಶಕ ಡಾ. ಎಸ್. ಸಿದ್ದರಾಮಣ್ಣ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರ ಸೇವನೆ ಹಾಗೂ ಮೂಢನಂಬಿಕೆ ತೊರೆದು ಆರೋಗ್ಯಕರ ಜೀವನ ನಡೆಸುವ ಬಗ್ಗೆ ಗರ್ಭಿಣಿಯರಿಗೆ ಮಾಹಿತಿ ನೀಡಲಾಯಿತು. ಸನ್ಮಾನ ಮತ್ತು ಫಲಾನುಭವಿಗಳಿಗೆ ಪಾಸ್ಬುಕ್ ವಿತರಣೆ ನಡೆಯಿತು.