ಬೆಂಗಳೂರು ಉತ್ತರ: ಮೆಟ್ರೋ ದರ ಏರಿಕೆ ಅಥವಾ ಇಳಿಕೆ?! ಮೆಟ್ರೋ ಪ್ರಯಾಣಿಕರ ಗಮನಕ್ಕೆ! ತೇಜಸ್ವಿ ಸೂರ್ಯ ಮೆಟ್ರೋ ಅಧಿಕಾರಿಗಳ ಭೇಟಿ
ಮೆಟ್ರೋ ಅಧಿಕಾರಿಗಳ ಭೇಟಿ ಮಾಡಿ ಮೆಟ್ರೋ ಅವೈಜ್ಞಾನಿಕ ದರ ಏರಿಕೆ ವಿರುದ್ಧ ಮತ್ತೊಮ್ಮೆ ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿದ್ದಾರೆ. ದರ ಏರಿಕೆ ಫಿಕ್ಸ್ ಮಾಡಿರುವ ಫೇರ್ ಕಮಿಟಿಗೆ ಮಾಹಿತಿ ಕೊರತೆಯಿದೆ. ಹಿಂದೆ 2017ರಲ್ಲಿ ದರ ಏರಿಕೆ ಮಾಡಿದಾಗ 15 ಪರ್ಸೆಂಟ್ ಏರಿಕೆ ಆಗಿತ್ತು. ಆಗ ವಿದ್ಯುತ್ ದರಕ್ಕೆ ಈಗ ಇರುವ ವಿದ್ಯುತ್ ದರಕ್ಕೆ ವ್ಯತ್ಯಯ ಆಗಿತ್ತು. ಹೀಗಿದ್ದರೂ ಅವೈಜ್ಞಾನಿಕ ದರ ಏರಿಕೆ ಮಾಡಿರೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಲಾಗಿದೆ.