ಬೆಂಗಳೂರು ಉತ್ತರ: ಟೆಕ್ಕಿ ಕೊಲೆಪ್ರಕರಣ, ಯುವಕನ ಬಂಧನ, ನಗರದಲ್ಲಿ ಪೋಲಿಸ್ ಕಮಿಷನರ್ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಬೆಂಕಿ ಅವಘಡ ಎಂದು ದಾಖಲಾಗಿದ್ದ ಪ್ರಕರಣದಲ್ಲಿ, ತನಿಖೆ ವೇಳೆ 19 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ. ಮೃತ ಯುವತಿಯ ಮನೆ ಪಕ್ಕದವನಾದ ಆರೋಪಿ, ಆಕೆಯ ಮುಖ ಪರಿಚಯ ಇದ್ದವನಾಗಿದ್ದು, ಕೃತ್ಯದ ದಿನ ಮನೆಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದ. ಒಂಟಿ ಮಹಿಳೆ ಕೊಲೆ ಪ್ರಕರಣವಾಗಿರುವುದರಿಂದ ಎಲ್ಲಾ ಆಯಾಮದ ತನಿಖೆ ನಡೆಯುತ್ತಿದ್ದು, ಎಫ್‌ಎಸ್ಎಲ್ ವರದಿ ಬಳಿಕ ಅತ್ಯಾಚಾರದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.