ಶಿವಮೊಗ್ಗ: ಉಕ್ಕಿ ಹರಿಯುತ್ತಿರುವ ಮಾಲತಿ ನದಿ; ಬಿದರಗೋಡು ಸಂಪರ್ಕ ರಸ್ತೆ ಬಂದ್
ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಪ್ರವಾಹ ರೀತಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಿಂದ ಹರಿಯುವ ಮಾಲತಿ ನದಿ ಉಕ್ಕಿ ಹರಿಯುತ್ತಿದೆ ಮಾಲತಿ ನದಿಯ ಪ್ರವಾಹದಿಂದಾಗಿ ಗುಡ್ಡಗೇರಿಯಿಂದ ಹೊನ್ನೆತಾಳು ಮಾರ್ಗವಾಗಿ ಬಿದರಗೋಡು ಸಂಪರ್ಕಿಸುವಂತಹ ರಸ್ತೆಗಿತವಾಗಿದೆ. ಮಾಲತಿ ನದಿ ನೀರು ನಾಬಳ ಬಳಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮದಿಂದಾಗಿ ವಾಹನ ಸಂಚಾರದ ಮಾರ್ಗ ಬದಲಾವಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಲತಿ ನದಿ ಪ್ರವಾಹದಿಂದಾಗಿ ಅಕ್ಕಪಕ್ಕದ ತೋಟಕ್ಕೂ ಸಹ ನದಿಯ ನೀರು ನುಗ್ಗಿರುವಾ ಘಟನೆ ಮಂಗಳವಾರ ಜರುಗಿದೆ.