ಸುಳೇಭಾವಿ ಗ್ರಾಮದಲ್ಲಿ ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ. ತ್ಯಾಗ ಬಲಿದಾನದ ಪ್ರತೀಕವಾಗಿರುವ ಪವಿತ್ರ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂರೆಲ್ಲರೂ ಕೂಡಿಕೊಂಡು ಶಾಂತಿ ಸೌಹಾರ್ದಯುತವಾಗಿ ಆಚರಿಸಿದರು. ಗ್ರಾಮದ ಜನರು ಭಾಗವಹಿಸಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಸುಳೇಭಾವಿ ಗ್ರಾಮದ ವಿವಿಧ ಗಲ್ಲಿಯ ಡೋಲಿಗಳು ಒಂದು ಕಡೆ ಸೇರಿದ್ದರಿಂದ ಮೊಹರಂ ಹಬ್ಬಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಿತು.