ಶಹಾಪುರದಲ್ಲಿ ಎಂಟನೇ ರವಿವಾರದ ಬುದ್ಧ ವಂದನೆ ಹಾಗೂ ಧಮ್ಮಪ್ರವಚನ
ಶಹಾಪುರ: ನಗರದ ಸಾರಿಪುತ್ರ ಬುದ್ಧ ವಿಹಾರ ಧಮ್ಮಗಿರಿಯಲ್ಲಿ ವರ್ಷಾವಾಸದ ನಿಮಿತ್ತ ಎಂಟನೇ ರವಿವಾರದ ಬುದ್ಧ ವಂದನೆ ಹಾಗೂ ಧಮ್ಮಪ್ರವಚನ ಕಾರ್ಯಕ್ರಮವು ಸೆಪ್ಟೆಂಬರ್ 20ರಂದು ನಡೆಯಿತು.
ಪೂಜ್ಯ ಭಂತೆ ಧಮ್ಮತಿಸ್ಸಾ ಹಾಗೂ ಬುದ್ಧರತ್ನ ಭಂತೆ ಅವರ ನೇತೃತ್ವದಲ್ಲಿ ಬುದ್ಧ ವಂದನೆ ಮತ್ತು ಧಮ್ಮಪ್ರವಚನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತ್ರಿಸರಣ ಹಾಗೂ ಪಂಚಶೀಲಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಪಾಲನೆ ಮಾಡಿದರೆ ನಿಜವಾಗಿಯೂ ನಾವು ಪಾವನರಾಗಲು ಸಾಧ್ಯ. ಬುದ್ಧನ ಮಾರ್ಗವು ಮನುಷ್ಯನಿಗೆ ಶಾಂತಿ ಹಾಗೂ ಸಂತೋಷವನ್ನು ನೀಡುತ್ತದೆ ಎಂದು ತಿಳಿಸಿದರು.
ಬುದ್ಧನ ಶಾಂತಿ ಮತ್ತು ತತ್ವಗಳು ಇಡೀ ಜಗತ್ತಿಗೆ ಆದರ್ಶವಾಗಿವೆ. ಈ ಹಿನ್ನೆಲೆಯಲ್ಲಿ ಬುದ್ಧ ವಿಹಾರದಲ್ಲಿ ಇಂತಹ ಧಾರ್ಮಿಕ ಹಾಗೂ ಧಮ್ಮದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು, ಬುದ್ಧನ ಧಮ್ಮದ ಮಾರ್ಗವನ್ನು ಅನುಸರಿಸಿ ಪಾವನ ಜೀವನ ನಡೆಸಬೇಕು ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಬುದ್ಧ ವಿಹಾರದ ಕಾರ್ಯದರ್ಶಿ ನೀಲಕಂಠ ಬಡಿಗೇರ್, ಸಹ ಕಾರ್ಯದರ್ಶಿ ಭೀಮರಾಯ ಹೊಸಮನಿ, ಮಲ್ಲಿಕಾರ್ಜುನ್ ಪೂಜಾರಿ, ನಾಗಣ್ಣ ಬಡಿಗೇರ್, ಬಾಗಪ್ಪ ಮುಂಡಾಸ್, ಮರಿಯಪ್ಪ ಬುಕುಲ, ಸಂದೀಪ್ ವಾಡಿ, ಯಂಕಪ್ಪ ಪೂಜಾರಿ, ಶರಣಬಸಪ್ಪ ಜಕಾಪೂರ, ನಿಂಗಪ್ಪ ಮಾಸ್ಟರ್, ಬಸವರಾಜ್ ತಳವಾರ್, ಶಿವು ತಳವಾರ, ಭೀಮರಾಯ ಬಡಿಗೇರ್, ಗುರಣ್ಣ ಬಾಣತಿಹಾಳ್, ಆನಂದ ಬಡಿಗೇರ್ ಸೇರಿದಂತೆ ಅನೇಕ ಬೌದ್ಧ ಅನುಯಾಯಿಗಳು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಭಾಗವಹಿಸಿದ್ದರು.
ಬುದ್ಧ ವಂದನೆ ಹಾಗೂ ಧಮ್ಮಪ್ರವಚನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುಯಾಯಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
#ಶಹಾಪುರ #ಬುದ್ಧವಿಹಾರ #ಧಮ್ಮಗಿರಿ #ಬುದ್ಧವಂದನೆ #ಧಮ್ಮಪ್ರವಚನ #ವರ್ಷಾವಾಸ #ಬುದ್ಧನಮಾರ್ಗ #ತ್ರಿಸರಣ #ಪಂಚಶೀಲ #ಬೌದ್ಧಧರ್ಮ #ಬೌದ್ಧಅನುಯಾಯಿಗಳು #ಅಂಬೇಡ್ಕರ್ಅನುಯಾಯಿಗಳು #ಧಮ್ಮ #ಬುದ್ಧ #yadgirnewslive
Yadgir, Yadgir | Sep 20, 2026