ಶೋರಾಪುರ: ದೇವಾಪುರ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಮೊಹರಂ ಹಬ್ಬ,ದೇವರ ಕುದುರೆ ರವಿ ಮುತ್ಯಾ ಕಾರಣಿಕ ಹೇಳಿಕೆ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಪುರ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಭಾನುವಾರ ಬೆಳಗಿನ ಜಾವ ಹುಸೇನ್ ಬಾಷಾ ದೇವರ ಸವಾರಿ ನಡೆಯಿತು. ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಅಲೈ ಆಡುವ ಮೂಲಕ ದೇವರ ಸವಾರಿಯಲ್ಲಿ ಭಾಗವಹಿಸಿದರು. ದೇವರ ಕುದುರೆ ರವಿ ಮುತ್ಯಾ ಹುಸೇನ್ ಬಾಷಾ ದೇವರ ಹಿಡಿದು ನಾಡಿನ ಮುಂದಿನ ಆಗು ಹೋಗುಗಳ ಕುರಿತು,ಮಳೆ ಬೆಳೆಯ ಕುರಿತು ಕಾರಣಿಕ ಹೇಳಿಕೆಯನ್ನು ನೀಡಿದರು.ಭಾಗವಹಿಸಿದ್ದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.