ಬೆಳಗಾವಿ: ಬೆಳಗಾವಿಯಲ್ಲಿ ಸಕ್ಕರೆ ಕಾರ್ಮಿಕರ ಬೃಹತ್ ರ್ಯಾಲಿ: ಸರ್ಕಾರದ ವಿರುದ್ಧ ಆಕ್ರೋಶ
ಬೆಳಗಾವಿಯಲ್ಲಿ ಕರ್ನಾಟಕ ಯುನೈಟೆಡ್ ಶುಗರ್ ವರ್ಕರ್ಸ್ ಫೆಡರೇಷನ್ ವತಿಯಿಂದ ಬೃಹತ್ ಸಮಾವೇಶ ನಡೆಯಿತು. 7ನೇ ತ್ರಿಪಕ್ಷೀಯ ವೇತನ ಮಂಡಳಿ ಜಾರಿ, ಬಾಕಿ ವೇತನ ಪಾವತಿ ಮತ್ತು ಮುಚ್ಚಿರುವ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಂತೆ ಕಾರ್ಮಿಕರು ಸರ್ಕಾರದ ಗಮನ ಸೆಳೆದರು.