ಬಳ್ಳಾರಿ: ನಾಪತ್ತೆಯಾದ ಮಕ್ಕಳ ಪತ್ತೆಗೆ ತಂತ್ರಜ್ಞಾನ ಬಳಕೆ: ಪೊಲೀಸ್ ಇಲಾಖೆಯಿಂದ ಹೊಸ ಸೂಚನೆ
ಜಿಲ್ಲೆಯಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆ ಕಾರ್ಯವನ್ನು ವೇಗಗೊಳಿಸಲು ತಂತ್ರಜ್ಞಾನದ ಬಳಕೆಗೆ ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಸೂಚನೆ ನೀಡಿದ್ದಾರೆ. 2020 ರಿಂದ ಇಲ್ಲಿಯವರೆಗೆ ದಾಖಲಾದ 385 ಪ್ರಕರಣಗಳಲ್ಲಿ 366 ಮಕ್ಕಳನ್ನು ಪತ್ತೆ ಮಾಡಲಾಗಿದ್ದು, ಉಳಿದ 19 ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.