ಶಿವಮೊಗ್ಗ: ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಜಿ.ಆರ್. ರಾಘವೇಂದ್ರ ಸ್ವಾಮಿ ಗೆಲುವು
ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಶನಿವಾರ ಜರುಗಿತು.ಈ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಜಿ.ಆರ್.ರಾಘವೇಂದ್ರ ಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ 388 ಮತಗಳ ಅಂತರದಲ್ಲಿ ಪ್ರತಿ ಸ್ಪರ್ಧೆ ಕೆಎಂ ಜಯರಾಮ್ ಅವರ ವಿರುದ್ಧ ರಾಘವೇಂದ್ರ ಸ್ವಾಮಿ ಗೆದ್ದಿದ್ದಾರೆ. ಕೆ.ಎಂ.ಜಯರಾಂ 173 ಮತಗಳನ್ನು ಪಡೆದರೆ. ರಾಘವೇಂದ್ರ ಸ್ವಾಮಿ.ಜಿ.ಆರ್ ಅವರು 561 ಮತಗಳನ್ನು ಪಡೆಯುವ ಮೂಲಕ 388 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.