ಶಿವಮೊಗ್ಗ: ಶಿವಮೊಗ್ಗದ ಲಯನ್ ಸಫಾರಿ ಸಮೀಪ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ
ಶಿವಮೊಗ್ಗದ ಲಯನ್ ಸಫಾರಿ ಸಮೀಪ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಶನಿವಾರ ಶಿವಮೊಗ್ಗ ಹೊರವಲಯದಲ್ಲಿರುವ ಲಯನ್ ಸಫಾರಿ ಸಮೀಪ ಎರಡು ಕಾರುಗಳ ನಡುವೆ ಬೀಗರ ರಸ್ತೆ ಅಪಘಾತ ಸಂಭವಿಸಿತ್ತು ಈ ಅಪಘಾತದಲ್ಲಿ ಸ್ಥಳದಲ್ಲಿ ಚಿತ್ರದುರ್ಗ ಮೂಲದ ಚಂದ್ರಶೇಖರ್ ಸಿದ್ದಯ್ಯ ಇಮಾಮ್ ಸಾಬ್ ಎಂಬ ಮೂವರು ಸಾವನ್ನಪ್ಪಿದ್ದರು. ಓಬಮ್ಮ (48) ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಮಹಿಳೆಯನ್ನ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಓಬಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಭಾನುವಾರ ತಿಳಿದು ಬಂದಿದ್ದು. ಈ ಮೂಲಕ ಅಪಘಾತದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.