ಜೋಯಿಡಾ : ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ಬುಧವಾರದ ನೀರಿನ ಮಟ್ಟ 556.33 ಮೀ ನೀರು ಇದೆ ಎಂದು ಇಂದು ಗಣೇಶಗುಡಿ ಕೆಪಿಸಿ ಕಾರ್ಯಾಲಯದಿಂದ ಮಾಹಿತಿ ಲಭ್ಯವಾಗಿದೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಸೂಪಾ ಜಲಾಶಯದಲ್ಲಿ ಒಳ ಹರಿವು 458.22 ಕ್ಯೂಸೆಕ್ಸ್ ಮತ್ತು ಹೊರ ಹರಿವು 4,877.91 ಕ್ಯೂಸೆಕ್ಸ್ ಇದೆ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.