ಮಂಗಳೂರು: ಸಾಂವಿಧಾನಿಕ ಸಂಸ್ಥೆಗಳ ತೇಜೋವಧೆ: ರಾಹುಲ್ ಗಾಂಧಿ ವಿರುದ್ಧ ಸಂಸದ ಬ್ರಿಜೇಶ್ ಚೌಟ ವಾಗ್ದಾಳಿ
ಚುನಾವಣಾ ಆಯೋಗದ ಸ್ಪಷ್ಟನೆಯು ರಾಹುಲ್ ಗಾಂಧಿಯವರ ಬೇಜವಾಬ್ದಾರಿ ಧೋರಣೆಯನ್ನು ಬಯಲು ಮಾಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ಜನಾದೇಶವನ್ನು ಗೌರವಿಸುವ ಬದಲು ಸಾಂವಿಧಾನಿಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.