ಹುಬ್ಬಳ್ಳಿ; ರಾಜ್ಯದಲ್ಲಿ ಆಡಳಿತ ಸತ್ತು ಹೋಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಅಧಿಕಾರ ದಾಹ ಹೆಚ್ಚಾಗಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕ, ರಾಜ್ಯ ಉಪಾಧ್ಯಕ್ಷ ಜ್ಯೋತಿ ಪ್ರಕಾಶ ಮಿರ್ಜಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರೀ ಹ್ಯಾಂಡ್ ಕೊಟ್ಟರೆ ಪೊಲೀಸರು ಉತ್ತಮ ಕಾರ್ಯ ಮಾಡುತ್ತಾರೆ. ಈಗಿರುವ ಪೊಲೀಸರಿಗೆ ಏರಿಯಾ ಬಗ್ಗೆ ಅರ್ಥ ಮಾಡಿಕೊಳ್ಳಲು ಆರು ತಿಂಗಳು ಬೇಕು, ಟ್ರಾನ್ಸಫರ್ ಪಾಲಸಿಯಿಂದ ವ್ಯವಸ್ಥೆ ಹಾಳಾಗಿದೆ. ರಾಜಕಾರಣಿಗಳ ಕೈಯಲ್ಲಿ ಇಲಾಖೆ ಇದ್ದರೆ ಒಳ್ಳೆಯದಾಗಲ್ಲ ಹಿಂದಿನಿಂದ ಕೂಡಾ ಈ ವ್ಯವಸ್ಥೆ ಬಂದಿದೆ ಈ ಕುರಿತು ಧ್ವನಿ ಎತ್ತಬೇಕಿತ್ತು ಎಂದರು..